ನಾನು ಬ್ಯಾಂಕಿನ ಅಧ್ಯಕ್ಷನಾಗಿ ಜುಲೈ ೨೦೦೯ ರಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ೨೦೦೯-೧೦ ರ ಹಣಕಾಸು ವರ್ಷವು ಬ್ಯಾಂಕಿನ ರಜತ ಮಹೋತ್ಸವ ವರ್ಷವಾಗಿದ್ದು ಬ್ಯಾಂಕು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಚಿಕೊ ವಿಶ್ವಾಸ್ ಎಂಬ ಹೊಸ ಸಾಲ ಯೋಜನೆಯನ್ನು ರೈತರ ಹಿತಾಸಕ್ತಿಯ ದೃಷ್ಠಿಯಿಂದ, ಜಾರಿಗೆ ತಂದಿದೆ. ಅಲ್ಲದೆ, ಶಾಖಾರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಎಂ.ಸಿ.ಹಳ್ಳಿ ಶಾಖೆಯ ಗೋಪಾಳ ಎಂಬಲ್ಲಿ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕರ ಮೂಲಕ ಪ್ರಾರಂಭಿಸಿತು. ಬ್ಯಾಂಕು ಮುಂಬರುವ ದಿನಗಳಲ್ಲಿ ಶಾಖಾರಹಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಯನ್ವಯ, ಈಗಾಗಲೆ ಗುರುತಿಸಲ್ಪಟ್ಟಿರುವ ಸ್ಥಳಗಳಲ್ಲಿ ಪ್ರಾರಂಭಿಸಲು ಯೋಜನೆಯನ್ನು ರೂಪಿಸಿದೆ. ಇದಲ್ಲದೆ ಗ್ರಾಹಕರಿಗೆ ಇನ್ನೂ ಹೆಚ್ಚಿನ ಬ್ಯಾಂಕಿಂಗ್ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಶಾಖೆಗಳನ್ನು ಕೋರ್ ಬ್ಯಾಂಕಿಂಗ್ ಜಾಲಕ್ಕೆ ಒಳಪಡಿಸಲು ಉದ್ದೇಶಿಸಿದೆ.
ಬ್ಯಾಂಕಿನ ಒಟ್ಟಾರೆ ವ್ಯವಹಾರವು ೩೧.೦೩.೨೦೧೦ ರ ಆರ್ಥಿಕ ವರ್ಷಕ್ಕೆ ಕೊನೆಗೊಂಡಂತೆ ರೂ. ೫೦೦ ಕೋಟಿ ದಾಟಿದೆ.
ಬ್ಯಾಂಕು ಸಾರ್ವಜನಿಕರಿಗೆ ಬ್ಯಾಂಕಿನ ಬಗ್ಗೆ ಮತ್ತು ಲಭ್ಯವಿರುವ ಸವಲತ್ತುಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಅಂತರ್ಜಾಲ ತಾಣವನ್ನು ರೂಪಿಸಿದ್ದು ಇದರ ಪ್ರಯೋಜನವನ್ನು ಪಡೆಯಲು ವಿನಂತಿಸುತ್ತೇನೆ.
ಈ ಸಂದರ್ಭದಲ್ಲಿ ಬ್ಯಾಂಕು ಇನ್ನು ಹೆಚ್ಚಿನ ಎತ್ತರಕ್ಕೆ ಬೆಳೆದು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಸಮರ್ಥ ಸೇವೆಯನ್ನು ಒದಗಿಸುವಂತಾಗಲಿ ಎಂದು ಹಾರೈಸುತ್ತೇನೆ ಜೊತೆಗೆ ನಮ್ಮೆಲ್ಲ ಆತ್ಮೀಯ ಗ್ರಾಹಕ ಬಂಧುಗಳು ಬ್ಯಾಂಕ್ ಒದಗಿಸುತ್ತಿರುವ ಸೌಲಭ್ಯವನ್ನು ಪಡೆದು ಬ್ಯಾಂಕಿನ ಏಳಿಗೆಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ.
ತಮ್ಮ ವಿಶ್ವಾಸಿ,
ಎ ಪಿ ಸುರೇಶ್.
|