ಪ್ರಾಂತೀಯ ಗ್ರಾಮೀಣ ಬ್ಯಾಂಕ್ ಕಾಯ್ದೆ ೧೯೭೬ ರ ಅನ್ವಯ ನಮ್ಮ ಬ್ಯಾಂಕ್, ೧೯೮೪ ರಲ್ಲಿ ಸ್ಥಾಪನೆಗೊಂಡಿತು. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಾರಣ ಬ್ಯಾಂಕಿಗೆ ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಎಂದು ಹೆಸರಿಸಲಾಯಿತು. ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೊಂದಾದ ಕಾರ್ಪೊರೇಶನ್ ಬ್ಯಾಂಕ್ ನಿಂದ ಪ್ರವರ್ತಿತಗೊಂಡಿದೆ. ಬ್ಯಾಂಕಿನ ಕೇಂದ್ರ ಕಛೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರಿನಲ್ಲಿದೆ.
ಬ್ಯಾಂಕ್ ಕಾರ್ಯಕ್ಷೇತ್ರ ಹೊಂದಿರುವ ಪ್ರದೇಶವು ಗಿರಿಕೊಳ್ಳಗಳಿಂದ ಕೂಡಿದ್ದು ಸ್ವಲ್ಪ ಭಾಗ ಮೈದಾನವನ್ನು ಹೊಂದಿದೆ. ಕಾರ್ಯಕ್ಷೇತ್ರದ ಎರಡು ಜಿಲ್ಲೆಗಳು ಉತ್ತಮ ಮಟ್ಟದ ಕಾಫಿ ಬೆಳೆಗಾಗಿ ರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ರಾಷ್ಟ್ರದ ಕಾಫಿ ರಫ್ತಿನ ಸಿಂಹಪಾಲನ್ನು ಈ ಪ್ರದೇಶವು ಪಡೆದಿದೆ. ಸ್ವಾಭಾವಿಕವಾಗಿ ಈ ಎರಡೂ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ವಾರ್ಷಿಕ ಸರಾಸರಿ ೮೦೦ ಮಿ.ಮೀ ಮಳೆಯಾಗುತ್ತದೆ.
ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಈ ಎರಡೂ ಜಿಲ್ಲೆಗಳ ಜನರಿಗೆ ಸೇವೆ ಸಲ್ಲಿಸುವ ಕುರಿತು ಬ್ಯಾಂಕಿಗೆ ಹೆಮ್ಮೆ ಇದೆ. ಬ್ಯಾಂಕು ೫೨ ಶಾಖೆಗಳ ಜಾಲವನ್ನು ಹೊಂದಿದೆ. ಇದರಲ್ಲಿ ೩೪ ಶಾಖೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಯು ಮತ್ತು ಮತ್ತು ಉಳಿದ ೧೮ ಶಾಖೆಗಳು ಕೊಡಗು ಜಿಲ್ಲೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿವೆ.
|